ಇದು ಕೃಷಿಕರೇ ರೂಪಿಸುವ ಕೃಷಿಕಪರ ಮಾಧ್ಯಮ. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಫಾರ್ಮರ್ ಫಸ್ಟ್
ಟ್ರಸ್ಟಿನ ಪ್ರಕಟಣೆ. ದೇಶದ ಪತ್ರಿಕಾರಂಗದಲ್ಲೇ ಇದು ವಿಶಿಷ್ಟ ಪ್ರಯತ್ನ. ಯಶಸ್ವಿ ಮೂರು ದಶಕ ಪೂರೈಸಿದ ಹಿರಿಮೆ.
ಪತ್ರಿಕೆ ಕೇವಲ ಅಡಿಕೆಗಷ್ಟೇ ಸೀಮಿತವಲ್ಲ. ವಿವಿಧ ಬೆಳೆ - ವಿಷಮುಕ್ತ ಕೃಷಿ – ಶ್ರಮ ಉಳಿಸುವ ಸುಲಭೋಪಾಯ –
ಮೌಲ್ಯವರ್ಧನೆ – ಯಂತ್ರೋಪಕರಣ – ರೈತಾವಿಷ್ಕಾರ – ನೇರ ಮಾರುಕಟ್ಟೆ – ನೆಲಜಲ ಸಂರಕ್ಷಣೆ...ಬೇರೆಲ್ಲೂ ಸಿಗದ ಎಕ್ಸ್ ಕ್ಲೂಸಿವ್ ಲೇಖನಗಳು, ವಿಚಾರಪೂರ್ಣ ಸಂಪಾದಕೀಯ, ಉಪಯುಕ್ತ ಅಂಕಣಗಳ ಸಮೃದ್ಧ ಮಾಹಿತಿ ಭಂಡಾರ.
ಡಿಜಿಟಲ್ ಪ್ರತಿ ಅಥವಾ ಮುದ್ರಿತ ಪ್ರತಿ – ಚಂದಾದಾರರಾಗುವವರು ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಿದೆ.
ನೆನಪಿಡಿ : ಒಮ್ಮೆ ಆಯ್ಕೆ ಮಾಡಿಕೊಂಡ ಮೇಲೆ ಡಿಜಿಟಲ್ ಪ್ರತಿಯಿಂದ ಮುದ್ರಿತ ಪ್ರತಿಗೆ ಅಥವಾ ಮುದ್ರಿತ ಪ್ರತಿಯಿಂದ ಡಿಜಿಟಲ್ ಪ್ರತಿಗೆ ಬದಲಾಯಿಸಲು ಬರುವುದಿಲ್ಲ. ಆಯ್ಕೆ ಮಾಡಿಕೊಂಡ ರೀತಿಯ ಪ್ರತಿಯಷ್ಟೇ ನಿಮಗೆ ಚಂದಾ ಅವಧಿಯಲ್ಲಿ ಸಿಗುತ್ತದೆ. ಎಲ್ಲಾ ವಿವರಗಳನ್ನೂ ಚೆನ್ನಾಗಿ ಓದಿ ನಿರ್ಧರಿಸಿ ನಿಮ್ಮ ಆಯ್ಕೆ ಮಾಡಿಕೊಳ್ಳಬೇಕೆಂದು ವಿನಮ್ರವಾಗಿ ಕೋರುತ್ತೇವೆ.
ಡಿಜಿಟಲ್ ಪ್ರತಿ : (ಸಾಫ್ಟ್ ಕಾಪಿ) ಡಿಜಿಟಲ್ ಪ್ರತಿಯನ್ನು ಕಂಪ್ಯೂಟರ್ ಅಥವಾ ಮೊಬೈಲ್ ಫೋನಿನಲ್ಲಿ ಮಾತ್ರ ಓದಲು ಸಾಧ್ಯ. ಡಿಜಿಟಲ್ ಪ್ರತಿಯ ಚಂದಾದಾರರು Sign in ಆಗಿ ಈ ಜಾಲತಾಣದಿಂದಲೂ ಪಿಡಿಎಫ್ ಪ್ರತಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಜತೆಗೆ ಇಲ್ಲಿರುವ ಯಾವುದೇ ಲೇಖನಗಳನ್ನು ಓದುವ ಸೌಲಭ್ಯವೂ ಇದೆ.
ಮುದ್ರಿತ ಪ್ರತಿ : (ಪ್ರಿಂಟ್ ಕಾಪಿ / ಹಾರ್ಡ್ ಕಾಪಿ) ಮುದ್ರಿತ ಪ್ರತಿಗೆ ಚಂದಾದಾರರಾದವರಿಗೆ ಪತ್ರಿಕೆಯನ್ನು ನಮ್ಮ ಕಚೇರಿಯಿಂದ ಅಂಚೆಯ ಮೂಲಕ ಕಳಿಸುತ್ತೇವೆ.
ಚಂದಾ ದರ :
ದೇಶದಲ್ಲಿ - ವಾರ್ಷಿಕ: ರೂ.275 | ತ್ರೈವಾರ್ಷಿಕ: ರೂ.800 | ಪಂಚವಾರ್ಷಿಕ: ರೂ.1,300
ವಿದೇಶ – ವಾರ್ಷಿಕ 25 ಡಾಲರ್ (ಡಿಜಿಟಲ್ ಮಾತ್ರ)
ದಯವಿಟ್ಟು ಗಮನಿಸಿ. ಜಾಲತಾಣವನ್ನು ಸಂದರ್ಶಿಸುವವರಿಗೆ ಅಡಿಕೆ ಪತ್ರಿಕೆಯಲ್ಲಿ ಪ್ರಕಟವಾದ ಕೆಲವು ಲೇಖನಗಳನ್ನು ಉಚಿತವಾಗಿ ಓದುವ ಅವಕಾಶ ಕಲ್ಪಿಸಿದ್ದೇವೆ.
ಅಡಿಕೆ ಪತ್ರಿಕೆಯನ್ನು ಪ್ರಕಟಿಸುತ್ತಿರುವ ಫಾರ್ಮರ್ ಫಸ್ಟ್ ಟ್ರಸ್ಟ್ ಯಾವುದೇ ವ್ಯಾಪಾರ ಉದ್ದೇಶ ಹೊಂದಿಲ್ಲ. ಒಂದಿಷ್ಟೂ ಉತ್ಪ್ರೇಕ್ಷೆ, ಅರೆಬೆಂದ ಮಾಹಿತಿಗೆ ಎಡೆಕೊಡದೆ ರೈತಹಿತದ ಮಾಹಿತಿ ನೀಡುವುದಷ್ಟೆ ಇದರ ಧ್ಯೇಯ.