ಉತ್ಪಾದಿಸಿದ ಜ್ಯಾಮ್ ಅಷ್ಟನ್ನೂ ರಮೇಶ್ ತಾವೇ ಸ್ವತಃ ನೇರ ಮಾರಾಟ ಮಾಡುತ್ತಾರೆ. ಇದಕ್ಕಾಗಿಯೇ ಅವರು ನೆರೆಕರೆಯಲ್ಲಿ ನಿಗದಿತ ದಿನ ನಡೆಯುವ ಸಂತೆಗಳಲ್ಲಿ ಅಂಗಡಿ ತೆರೆಯುತ್ತಾರೆ.
- ಶ್ರೀ
ತಮಿಳುನಾಡಿನ ಯುವಕ ರಮೇಶ್ ರಂಗಸ್ವಾಮಿ (30) ಒಬ್ಬರು ಯು ಟ್ಯೂಬರ್. ಊರು ಧರ್ಮಪುರಿ ಜಿಲ್ಲೆಯ ಹರೂರು. ಬೇರೆಬೇರೆಯವರ ಸಾಧನೆಗೆ ಕನ್ನಡಿ ಹಿಡಿಯುವ ಅವರಿಗೆ ವರ್ಷಗಳ ಹಿಂದೆ ಸಿಕ್ಕಿದ್ದು ಸುರೇಶ್.
ಸುರೇಶ್ ಸ್ಥಳೀಯವಾಗಿ ಅತ್ತಿ ಹಣ್ಣಿನಿಂದ ಹತ್ತು ಬಗೆಯ ಉತ್ಪನ್ನ ಮಾಡಿ ಮಾರುತ್ತಿದ್ದರು. ಇದು ರಮೇಶರಿಗೆ ಪ್ರೇರಣೆ ಆಯಿತು. ಇವರ ಊರಿನ ಸುತ್ತಮುತ್ತ ಧಾರಾಳ ಬೇಲದ ಹಣ್ಣು ಲಭ್ಯ. ಅವರು ಬೇಲದ ಹಣ್ಣಿನಿಂದ ಜ್ಯಾಮ್ ಮಾಡಲು ಕಲಿತುಕೊಂಡರು.
ಉತ್ಪಾದಿಸಿದ ಜ್ಯಾಮ್ ಅಷ್ಟನ್ನೂ ರಮೇಶ್ ತಾವೇ ಸ್ವತಃ ನೇರ ಮಾರಾಟ ಮಾಡುತ್ತಾರೆ. ಇದಕ್ಕಾಗಿಯೇ ಅವರು ನೆರೆಕರೆಯಲ್ಲಿ ನಿಗದಿತ ದಿನ ನಡೆಯುವ ಸಂತೆಗಳಲ್ಲಿ ಅಂಗಡಿ ತೆರೆಯುತ್ತಾರೆ.
ಬೇಲದ ಜ್ಯಾಮ್ ಅಲ್ಲದೆ ಸೂಪ್ ಪೌಡರ್, ಉಪ್ಪಿನಕಾಯಿಯನ್ನೂ ರಮೇಶ್ ತಯಾರಿಸುತ್ತಾರೆ. ಆಶ್ಚರ್ಯವೆಂದರೆ ಇವರು ಹೇಳುವ ಪ್ರಕಾರ,
ತಮಿಳುನಾಡಿನ ಮೂರು ಪ್ರದೇಶಗಳಲ್ಲಾಗಿ ವರ್ಷದ ಒಂಭತ್ತು ತಿಂಗಳು ಬೇಲದ ಹಣ್ಣು ಸಿಗುತ್ತದಂತೆ.
ಆಗಸ್ಟ್ ನವೆಂಬರಿನಲ್ಲಿ ಹರೂರು ಹಿಲ್ ಸ್ಟೇಶನಿನ ಬಳಿ, 160 ಕಿ.ಮೀ ದೂರದ ಜಾವಡು ಹಿಲ್ಸಿನಲ್ಲಿ ಜುಲೈಯಿಂದ ಸೆಪ್ಟೇಂಬರ್ ತನಕ, ಸತ್ಯಮಂಗಲಂ ಕಾಡಿನ ಬಳಿ ಜನವರಿಯಿಂದ ಫೆಬ್ರವರಿ ತನಕ ಬೇಲದ ಹಣ್ಣು ಸಿಗುತ್ತದೆ ಎನ್ನುತ್ತಾರೆ. ಇವರ ಪ್ರಕಾರ ಮಾರ್ಚ್ ತಿಂಗಳಿಂದ ಜೂನ್ ವರೆಗೆ ಎಲ್ಲೂ ಬೇಲದ ಹಣ್ಣು ಸಿಗುತ್ತಿಲ್ಲ.
ರಮೇಶ್ ತನ್ನ ಉತ್ಪನ್ನಗಳನ್ನು ಕೊರಿಯರ್ ಮೂಲಕವೂ ಕಳಿಸುತ್ತಾರೆ.
ಸಂಪರ್ಕ
91597 59140