ಶಿರಸಿ ತಾಲೂಕಿನ ಬೆಣಗಾಂವಿನ ಮಧುರಾ ಮಂಜುನಾಥ್ ಭಟ್ ಈ ವರ್ಷ ದಶಂಬರದಲ್ಲೂ ಹಲಸಿನ ಹಪ್ಪಳ ಮಾಡಿದ್ದಾರೆ. ಅದೂ ಅಷ್ಟಿಷ್ಟು ಅಲ್ಲ, ಎರಡು ಸಾವಿರ!
- ಮಧುರಾ ಭಟ್
ಶಿರಸಿ ತಾಲೂಕಿನ ಬೆಣಗಾಂವಿನ ಮಧುರಾ ಮಂಜುನಾಥ್ ಭಟ್ ಈ ವರ್ಷ ದಶಂಬರದಲ್ಲೂ ಹಲಸಿನ ಹಪ್ಪಳ ಮಾಡಿದ್ದಾರೆ. ಅದೂ ಅಷ್ಟಿಷ್ಟು ಅಲ್ಲ, ಎರಡು ಸಾವಿರ!
ಈ ಸಲ ಬೇಸಿಗೆಯಲ್ಲಿ ಹಲಸು ಸಿಗುತ್ತಿದ್ದಾಗ ಕಾರಣಾಂತರದಿಂದ ಹಪ್ಪಳ ಮಾಡಲು ಆಗಲಿಲ್ಲ. ಡ್ರೈಯರಿನಲ್ಲಿ ಒಣಗಿಸಿಟ್ಟ ಹಲಸಿನ ಸೊಳೆ ಇತ್ತು. ಅದರಿಂದಲೇ ಹಪ್ಪಳ ಮಾಡಿದರೆ ಹೇಗೆ ಅನಿಸಿತು. ಮಾಡಿದರು, ಗೆದ್ದರು!
ಹಪ್ಪಳ ಮಾಡಲು ಇವರು ಒಣ ಸೊಳೆಯ ಹುಡಿ ಮಾಡಲಿಲ್ಲ, ಬದಲಿಗೆ ನೀರಿನಲ್ಲಿ ನೆನೆಸಿದರು. ಎರಡು ಗಂಟೆ ಕಾಲ ನೆನೆಸುವುದರ ನಡುವೆ 2 - 3 ಸಲ ನೀರು ಬದಲಾಯಿಸಿದ್ದರು. ಅಷ್ಟರಲ್ಲಿ ಅದು ತಾಜಾ ಸೊಳೆಯಂತೆಯೇ ಆಯಿತು.
ಹಪ್ಪಳ ತಿಂದವರು ‘ತಾಜಾ ಸೊಳೆಯ ಹಪ್ಪಳದಂತೆಯೇ ಆಗ್ತದೆ’ ಎನ್ನುತ್ತಾರಂತೆ. “ಆದರೂ ಕೆಲವು ಸೂಕ್ಷ್ಮ ವ್ಯತ್ಯಾಸಗಳಿವೆ. ಹಲಸಿನದು ಅಂತ ಗೊತ್ತಾಗುತ್ತದೆ. ಈ ವಿಧಾನದಲ್ಲಿ ಅಕಾಲದಲ್ಲಿ ಬೇಕಾದಾಗ ಹಪ್ಪಳ ಮಾಡಿ ಸವಿಯಲು ಅಡ್ಡಿಯಿಲ್ಲ” ಎನ್ನುತ್ತಾರೆ.
ಮಧುರಾ ಭಟ್ ಸಂಪರ್ಕ - 94831 28617 ವಾಟ್ಸಪ್ ಕರೆ ಮಾತ್ರ;
(ಅನುಕೂಲ ಸಮಯ ರಾತ್ರಿ 8.30 - 9.30)