ಚಿಪ್ಸ್ ಕಟಿಂಗ್ ಯಂತ್ರ್ರ - ಕಾಯಿಸೊಳೆ ರವೆಯಿಂದ ಇಡ್ಲಿ, ಉಪ್ಮಾ
- ಶ್ರೀ
ಚಿಪ್ಸ್ ಕಟಿಂಗ್ ಯಂತ್ರ್ರ
ಯಲ್ಲಾಪುರದ ರವಿ ಭಟ್ (30) ಎಸ್ಸೆಸ್ಸೆಲ್ಸಿಯ ಬಳಿಕ ಕಲಿತದ್ದು ಪೌರೋಹಿತ್ಯ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಕಡೆ ಒಲವು. ತಂದೆ ದಶಕಗಳಿಂದ ಕುರುಕು ತಿಂಡಿ ಉದ್ದಿಮೆ ನಡೆಸುತ್ತಿದ್ದಾರೆ.
ಯೂ-ಟ್ಯೂಬ್ ನೋಡಿ ಸ್ವಶಿಕ್ಷಣ. ನಾಲ್ಕು ವರ್ಷದಿಂದ ಇವರು ಚಿಪ್ಸ್ ಕಟ್ಟಿಂಗ್ ಯಂತ್ರ ಮಾಡುತ್ತಿದ್ದಾರೆ. ಮೊದಲು ಮಾಡಿದ್ದು ಕೈಚಾಲಿತ. ಬೆಲೆ ರೂ.7,000 ಗಂಟೆಗೆ 10 - 15 ಕಿಲೋ ಕಟ್ಟಿಂಗ್ ಮಾಡಬಹುದು. ಎರಡು ವರ್ಷಗಳಿಂದ ಮೋಟಾರ್ ಚಾಲಿತ ಯಂತ್ರ ತರುತ್ತಿದ್ದಾರೆ. ಇದಕ್ಕೆ 20 - 25 ಕಿಲೋ ಸಾಮಥ್ರ್ಯ. ಬೆಲೆ ರೂ. 14,000. ಈವರೆಗೆ 15 ಯಂತ್ರ ಮಾಡಿ ಕೊಟ್ಟಿದ್ದಾರೆ.
ರವಿ ಭಟ್ - 94835 00861
-----------------------------------------------------------------------------------------------------
ಕಾಯಿಸೊಳೆ ರವೆಯಿಂದ ಇಡ್ಲಿ, ಉಪ್ಮಾ
ಹಲಸಿನ ಕಾಯಿಸೊಳೆ ರವೆಯ ಉಪ್ಪಿಟ್ಟು ಶಿರಸಿ ಹಲಸಿನ ಮೇಳದ ಸ್ಪರ್ಧೆಯಲ್ಲಿ ಎರಡನೆ ಬಹುಮಾನ ಪಡೆದುಕೊಂಡಿದೆ. ‘ರುಚಿಯೂ ಛಲೋ ಇದೆ. ಹಲವರು ತಿಂದು ನೋಡಿ ಮೆಚ್ಚಿಕೊಂಡರು’ ಎನ್ನುತ್ತಾರೆ ಇದರ ಯೋಜಕ ಮಹೇಶ್ ಹೆಗಡೆ ಮುಕ್ರಮನೆ.
ಪತ್ನಿ ಶ್ಯಾಮಲಾ ಅವರ ಪ್ರಕಾರ, ‘ರವೆ, ಕಾಯಿಸೊಳೆ ಹುಡಿ ಇತ್ಯಾದಿ ತಯಾರಿಸುವುದು ಮಹೇಶ್ ಕೆಲಸ. ಮುಂದಿನ ಪ್ರಯೋಗ ನನ್ನದು.’ ಇವರು ಹಲಸಿನ ಕಾಯಿಸೊಳೆ ಹುಡಿಯಿಂದ ಬರ್ಫಿ, ಪೂರಿ, ಶಂಕರಪೋಳಿ ಇತ್ಯಾದಿ ಮಾಡಿದ್ದಾರೆ. ಪ್ರಯೋಗಗಳು ಮುಂದುವರಿದಿವೆ.
ಸೀಸನ್ ಮುಗಿಯುವುದರೊಳಗೆ ಕಾಯಿಸೊಳೆ ರವೆ ತಯಾರಿಸಿ ‘ಕದಂಬ’ದ ಮೂಲಕ ಮಾರುವ ಪ್ಲಾನ್ ಮಹೇಶರಿಗಿದೆ. ತಮಿಳುನಾಡಿನ ಕೇಂದ್ರ ಬಾಳೆ ಸಂಶೋಧನಾ ಕೇಂದ್ರ ನೇಂದ್ರ ಬಾಳೆಕಾಯಿಯ ಉಪ್ಮಾ ತಯಾರಿಸಿದೆ. ಮುಕ್ರಮನೆಯವರ ಈ ಸಂಶೋಧನೆಯಷ್ಟೇ ಮಹತ್ವದ್ದು.
ಇನ್ನಷ್ಟ್ಟು ಆರ್ ಆಂಡ್ ಡಿ ಮಾಡಿ ವೃತ್ತಿಪರರು ಬ್ರಾಂಡ್ ಮಾಡಿ ಹೊರತಂದರೆ ‘ಗ್ರೀನ್ ಜ್ಯಾಕ್ ಫ್ರುಟ್ ರವಾ’ಕ್ಕೆ ಒಳ್ಳೆ ಅವಕಾಶವಿದೆ. ಇದು ಗ್ಲುಟೇನ್ ಮುಕ್ತ ಆಹಾರ. ಮುಂಜಾನೆ ಉಪಾಹಾರಕ್ಕೆ ಬಳಕೆಯಾಗತೊಡಗಿದರೆ, ದೊಡ್ಡ ಪ್ರಮಾಣದ ಹಲಸನ್ನು ಆಹಾರವಾಗಿಸಬಹುದು. ಮುಕ್ರಮನೆಯವರು ಬಳಸಿದ್ದು ತುಳುವ / ಬಿಳುವ (ಸಾಫ್ಟ್ ಫ್ಲೆಶ್ಡ್ ಹಲಸು) ಎನ್ನುವುದೂ ಗಮನಾರ್ಹ.
ಮಹೇಶ್ ಮುಕ್ರಮನೆ - 94491 93602 (ರಾತ್ರಿ 9 - 10)