ADD

Back To Free Articles

May-2024

ಬೆಳೆಸುವ ಹಣ್ಣುಗಳ ರುಚಿ ವರ್ಧನೆ ಸಾಧ್ಯ!

ನಿಮ್ಮ ಹಿತ್ತಲಿನ ಮರದ ಹಣ್ಣು ರುಚಿ ಚೆನ್ನಾಗಿಲ್ಲ ಎಂದು ದುಡುಕಿ ಕಡಿದು ಬಿಡಬೇಡಿ. ಒಂದಷ್ಟು ಸರಳ ಆರೈಕೆಗಳ ಮೂಲಕ ಅದನ್ನು ಸುಧಾರಿಸುವ ಸಾಧ್ಯತೆ ಇದೆಎನ್ನುತ್ತಾರೆ ಅನುಭವಿ ಕೃಷಿಕರು.

- ಅಪ ಬಳಗ

 

ನಾಲ್ಕೈದು ವರುಷದಿಂದ ಒಂದು ರೊಲೀನಿಯ ಗಿಡದಲ್ಲಿ ದೊಡ್ಡ ಗಾತ್ರದ ಹಣ್ಣು ಆಗುತ್ತಿತ್ತು. ಬರೇ ಸಿಪ್ಪೆ, ಬೀಜ ಜಾಸ್ತಿ, ತಿನ್ನುವ ಅಂಶ ಕಡಿಮೆ. ಹಾಗಾಗಿ ಕೇಳಿದವರಲ್ಲೆಲ್ಲ್ಲಾ ‘ಯಾರೂ ನೆಡಬೇಡಿ’ ಎಂದು ತುತ್ತೂರಿ ಊದುತ್ತಿದ್ದೆ.

ಈ ಸಲ ಬೇರೆ ಹಣ್ಣುಗಳಿಗೆ ಸಿಹಿ ಬರಿಸುವ ಹಾಗೆ ಇದಕ್ಕೂ 250 ಗ್ರಾಂ ಪೊಟ್ಯಾಷ್ ಹಾಗೂ  ಒಂದು ಚಮಚ ಲಘು ಪೋಷಕಾಂಶ ಹಾಕಿದೆ. ಲಘು ಪೋಷಕಾಂಶಗಳಲ್ಲಿ ಹಲವಾರು ಬ್ರಾಂಡ್ ಇದೆ. ನಾನು karishma ಎನ್ನುವ ಪ್ರೊಡಕ್ಟ್ ಬಳಸುತ್ತೇನೆ.

ಈ ಮರವನ್ನು ಕಡಿದು ಅಲ್ಲಿ ಬೇರೆ ಗಿಡ ನೆಡುವುದೆಂದು ಯೋಚಿಸಿದ್ದೆ. ಆದರೆ ಈ ಸಲ ಒಳ್ಳೆಯ ಪಲ್ಪ್ ಇದ್ದ ಹಣ್ಣುಗಳು ಲಭ್ಯವಾಗಿದ್ದು ತುಂಬಾ ಸಿಹಿ ಆಗಿತ್ತು. ಹಿಂದೆ ಹಲಸಿನಲ್ಲಿ ಇದೇ ಪ್ರಯೋಗ ಯಶಸ್ವಿ ಆದ ಕಾರಣ ಈ ಪ್ರಯೋಗ ಮಾಡಿದ್ದೆ.

ಮುಂದೆ ಯಾರಾದರೂ ಯಾವುದೇ ಹಣ್ಣಿನ ರುಚಿ ಚೆನ್ನಾಗಿಲ್ಲ ಎಂದು ಕಡಿದು ಹಾಕುವ ಮೊದಲು ಮೇಲಿನ ಪ್ರಯೋಗ ಮಾಡಿ ನೋಡಿ.

- ಶ್ಯಾಮಸುಂದರ ಭಟ್, ಗೇರುಕಟ್ಟೆ

ಪಪ್ಪಾಯಿಯಲ್ಲಿ ರುಚಿ ಮತ್ತು ಗಾತ್ರ ಬರಬೇಕಾದರೆ ಗಿಡಗಳಿಗೆ ಬೇವಿನ ಹಿಂಡಿ, ಹರಳಿಂಡಿ, ಹುಚ್ಚೆಳ್ಳು ಹಿಂಡಿ, ಹೊಂಗೆ ಹಿಂಡಿ - ಹೀಗೆ ನಾಲ್ಕೈದು ವಿಧದ ಹಿಂಡಿಗಳನ್ನು ಹಾಕಿ.  ಜತೆಗೆ ಬೂದಿಯನ್ನೂ ಸೇರಿಸಿ. ಭತ್ತದ ಜೊಳ್ಳಿನ ಬೂದಿ ಅಥವಾ ಒಲೆಯ ಬೂದಿಯೂ ಓಕೆ. ಇವೆಲ್ಲಾ ರಾಸಾಯನಿಕರಹಿತ.

ಮುಖ್ಯವಾಗಿ ಹಲಸಿನ ಮರದಲ್ಲಿ ಎಳೆಕಾಯಿ ಒಣಗುವುದು, ಕಾಯಿ ಹಂತದಲ್ಲಿ ಕೊಳೆಯುವುದರ ಕುರಿತು ನನ್ನಲ್ಲಿ ಅನೇಕ ಮಂದಿ ಸಲಹೆ ಕೇಳುತ್ತಿದ್ದಾರೆ.  ಒಣ ಪ್ರದೇಶವಾದ್ದರಿಂದ ಅವರು ಮರಗಳಿಗೆ ನೀರು ಕೂಡಾ ಕೊಡುತ್ತಿರಲಿಲ್ಲ. 

ಹಲಸಿನ ಗಿಡ/ಮರದ ಸುತ್ತ ಪಾತಿ ಮಾಡಿ. ಬುಡದಿಂದ 3 - 4 ಅಡಿ ದೂರದಲ್ಲಿ ಹೊಂಗೆ, ಬೇವು, ಹರಳು, ಹುಚ್ಚೆಳ್ಳು ಈ ಹಿಂಡಿಗಳನ್ನು ಹಾಕಿ. ಟ್ರೈಕೋಡರ್ಮಾ ಸೇರಿಸಿ. ಇಪ್ಪತ್ತು ಕಿಲೋದಷ್ಟು  ಕೊಟ್ಟಿಗೆ ಗೊಬ್ಬರವನ್ನೂ ಹಾಕಿ. ನಿಯಮಿತವಾಗಿ ನೀರು ಕೊಡಿ.

ಹೀಗೆ ಪ್ರಯೋಗ ಮಾಡಿದವರಲ್ಲಿ ಮುಂದಿನ ವರುಷಕ್ಕೇ ಕಾಯಿ/ಹಣ್ಣು ಬಂದಿದೆ. ಇದೇ ಪದ್ಧತಿಗಳನ್ನು ತೆಂಗಿನ ಮರಗಳಿಗೂ ಅಳವಡಿಸಿಕೊಳ್ಳ ಬಹುದು. ಅಡಿಕೆಗೆ ಬಾಧಿಸುವ ಸುಳಿ ರೋಗ, ಎಳೆಕಾಯಿ ಉದುರುವ ಸಮಸ್ಯೆಯೂ ನಿಯಂತ್ರಣಕ್ಕೆ ಬಂದಿದೆ.

ಇದರ ವೈಜ್ಞಾನಿಕ ಹಿನ್ನೆಲೆ ಹೀಗಿದೆ :  ಗಿಡಗಳಿಗೆ ಎನ್.ಪಿ.ಕೆ. ಸರಿಯಾಗಿ ಸಿಗುತ್ತಾ ಇರುತ್ತದೆ. ಆದರೆ ಲಘು ಪೆÇೀಷಕಾಂಶಗಳು (ಮೈಕ್ರೋನ್ಯೂಟ್ರಿಯೆಂಟ್ಸ್ಸ್) ಸಿಗುವುದಿಲ್ಲ. ಇದಕ್ಕಾಗಿ ಎಲ್ಲಾ ಹಿಂಡಿಗಳು, ಬೂದಿ ಕೊಡುವುದರಿಂದ ಈ ಅಂಶ ತುಂಬಿ ಬರುತ್ತದೆ.

ಆರೇ ತಿಂಗಳಲ್ಲಿ ಫಲಿತಾಂಶ ಕಂಡುಬಂದಿದೆ. ಬಳಸಿದವರು ಹಿಮ್ಮಾಹಿತಿ ನೀಡಿದ್ದಾರೆ. ಹಲಸಿಗೆ ಹುಳ ಬರುವುದಕ್ಕೆ ಕಾಯಿಗಳಿಗೆ ಬ್ಯಾಗ್ ಕಟ್ಟುವುದರಿಂದ ನಿಯಂತ್ರಣ ಬಂದಿದೆ. ಹಿಂಡಿಗಳನ್ನು ಕೊಡುವುದರಿಂದ ತುಂಬಾ ರುಚಿ ಬರುತ್ತದೆ. ಪಪ್ಪಾಯಿ ಗಿಡಕ್ಕೂ ಈ ತರಹದ ಹಿಂಡಿಗಳನ್ನು ಕೊಟ್ಟು ನೋಡಬಹುದು. 

ಕಿಚನ್ ಗಾರ್ಡನ್, ಟೆರೇಸ್ ಗಾರ್ಡನಿನಲ್ಲೂ ಬಳಸಬಹುದು. ಹಿಂಡಿಗಳ ದ್ರವ ರೂಪದಲ್ಲಿ ಕೊಟ್ಟರಾಯಿತು. ಇನ್ನೂ ಪರಿಣಾಮವಾಗಿ ಆಗಬೇಕಾದರೆ ಅನ್ನವನ್ನು ಚೆನ್ನಾಗಿ ಬೇಯಿಸಿ, ಗಂಜಿ ಸಹಿತ 3 - 4 ದಿವಸ ಇಟ್ಟಾಗ ಬೂಸ್ಟು ಬರುತ್ತದೆ. ಅದನ್ನು ಹಿಂಡಿಯೊಂದಿಗೆ ಮಿಕ್ಸ್ ಮಾಡಬಹುದು.

ಹೀಗೆ ಮಾಡಿದಾಗ ನೈಟ್ರೋಜನ್ ಜಾಸ್ತಿ ಸಿಗುತ್ತದೆ. ಪಾತಿಯಲ್ಲಿ ಇರುವ ಗಿಡಗಳಿಗೆ ಈ ಗೊಬ್ಬರ ಬೇಕು. ಈ ರೀತಿ ಟ್ರೀಟ್ ಮಾಡುವುದರಿಂದ ಕ್ಷಾರ ಕಡಿಮೆಯಾಗುತ್ತದೆ. ತರಕಾರಿ, ಹಣ್ಣುಗಳ ರುಚಿ ಚೆನ್ನಾಗಿರುತ್ತದೆ.

- ಶಿವಕುಮಾರ್ ಸ್ವಾಮಿ, ಉಗಮ ನರ್ಸರಿ, ಚಾಮರಾಜನಗರ

ನಾನು ಪಪ್ಪಾಯಿ ಗಿಡಗಳಿಗೆ ಪೊಟೇಶ್ ಕೊಟ್ಟಿದ್ದೇನೆ. ಹಣ್ಣುಗಳು ಸಿಹಿ ಬಂದಿವೆ. ಇದೇ ಪ್ರಯೋಗವನ್ನು ರಂಬುಟಾನ್‍ನಲ್ಲಿ ದೊಡ್ಡ ಸ್ಕೇಲಿನಲ್ಲಿ ಮಾಡಿದ್ದೇನೆ. ಸಿಂಪಡಣೆ ಮತ್ತು ಡ್ರಿಪ್ ಮೂಲಕ ಬುಡಕ್ಕೆ ಕೊಟ್ಟಿದೇನೆ. ಫಲಿತಾಂಶ ಬರುವ ತಿಂಗಳು ಇದೇ ಸಮಯಕ್ಕೆ.

- ವಿಶ್ವಪ್ರಸಾದ್ ಸೇಡಿಯಾಪು, ಪುತ್ತೂರು

ಇದೇ ಮೂಲತತ್ವ ಹೊಂದಿರುವ ಬೇಸಲ್ ಡೋಸ್ ಗೊಬ್ಬರದಿಂದ ಉತ್ಪನ್ನದ ಗರಿಷ್ಟ ಸಿಹಿ, ಮಧುರತೆ ಮಾತ್ರವಲ್ಲದೇ ಗರಿಷ್ಟ ಗಾತ್ರ, ಇಳುವರಿ + ಸಸ್ಯದ ರೋಗ ನಿರೋಧಕ ಶಕ್ತಿ ಸಾಧ್ಯವಿದೆ. ಈ ಬೇಸಲ್ ಡೋಸ್ ಗೊಬ್ಬರದ ಬಗ್ಗೆ ಅಡಿಕೆ ಪತ್ರಿಕೆಯ ಜುಲೈ 2023ರ ಸಂಚಿಕೆಯಲ್ಲಿ ವಿಸ್ತಾರವಾದ ಲೇಖನ ಪ್ರಕಟವಾಗಿದೆ. ಅನಂತರ ತುಂಬ ಮಂದಿ ಇದನ್ನು ಪ್ರಯೋಗ ಮಾಡಿ ನೋಡಿ ಯಶ ಪಡೆದಿದ್ದಾರೆ.

- ಡಾ. ಮನೋಹರ ಉಪಾಧ್ಯ

(ಮಾಹಿತಿಯ ಮೂಲ: ಫ್ರುಟ್ಸ್ ಆಂಡ್ ವೆಜ್ ವಾಟ್ಸಪ್ ಗುಂಪು)